Articles Category

Crop insurance: ಕರ್ನಾಟಕದ ರೈತರ ಖಾತೆಗಳಿಗೆ 4.32 ಕೋಟಿ ರೂ. ಬೆಳೆ ವಿಮೆ ಬಿಡುಗಡೆ:

4.23 crore Crop Insurance

Crop insurance: ಕರ್ನಾಟಕದ ರೈತರ ಖಾತೆಗಳಿಗೆ 4.32 ಕೋಟಿ ರೂ. ಬೆಳೆ ವಿಮೆ ಬಿಡುಗಡೆ:

ಬೆಳೆ ವಿಮೆ: ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ (Pradhan Mantri Fasal Bima Yojana) ರೈತಬಾಂಧವರ ಖಾತೆಗಳಿಗೆ 4.32 ಕೋಟಿ ರೂ. ಜಮೆಯಾಗಿದ್ದು, ಈ ಬೆಳೆ ವಿಮೆಯ ಮೊತ್ತವನ್ನು ರೈತರ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ. 2018-19 ನೇ ಸಾಲಿನಲ್ಲಿ ಹಲವು ರೈತರು ತಮ್ಮ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಿದ್ದರು. ಆದರೆ ಬೆಳೆ ಸಮೀಕ್ಷೆಯಲ್ಲಿ ನೊಂದಣಿಯಾದ ಬೆಳೆ ಮತ್ತು ಬೆಳೆ ವಿಮೆ ಮಾಡಿಸಿದ ಬೆಳೆಯಲ್ಲಿ ವ್ಯತ್ಯಾಸ ಕಂಡಿರುವ ಕಾರಣದಿಂದಾಗಿ ಅರ್ಜಿಗಳು ತಿರಸ್ಕೃತಗೊಂಡಿದ್ದವು.

ಈಗಾಗಲೇ ಧಾರವಾಡ ಜಿಲ್ಲೆಯಲ್ಲಿ ಸುಮಾರು 3,191 ಅರ್ಜಿಗಳು ತಿರಸ್ಕೃತವಾಗಿದ್ದವು, ತಿರಸ್ಕೃತ ಅರ್ಜಿಗಳನ್ನು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ತಾಲೂಕು ಮಟ್ಟದ ಕುಂದುಕೊರತೆ ಪರಿಹಾರ ಸಮಿತಿಯಲ್ಲಿ ಪುನರ್ ಪರಿಶೀಲಿಸಿ 3,191 ಪ್ರಕರಣಗಳ ಪೈಕಿ ಸುಮಾರು 1,939 ಪ್ರಕರಣಗಳನ್ನು ಅಂಗೀಕರಿಸಲಾಗಿದ್ದು, 4.32  ಕೋಟಿ ರೂ. ಗಳನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ.

ಕೇಂದ್ರ ಸಚಿವರಾಗಿರುವ ಪ್ರಹ್ಲಾದ್ ಜೋಶಿಯವರು ತಿರಸ್ಕೃತ ಪ್ರಕರಣಗಳನ್ನು ಪರಿಶೀಲಿಸಿ, ತೊಂದರೆಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈಗಾಗಲೇ, 2022-23 ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ವಿಮೆ ಅರ್ಜಿಗಳು ಪ್ರಾರಂಭವಾಗಿದ್ದು, ತಮ್ಮ ಬೆಳೆಗಳಿಗೆ ವಿಮೆ ಮಾಡಿಸ ಬಯಸುವ ರೈತರು ಆದಷ್ಟು ಬೇಗ ಅರ್ಜಿಗಳನ್ನು ಸಲ್ಲಿಸಬೇಕಾಗಿ ವಿನಂತಿ ಮಾಡಲಾಗಿದೆ.

ಇನ್ನು, ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ಎರಡರ ಬಗ್ಗೆ ಹಲವರಿಗೆ ಗೊಂದಲವಿರಬಹುದು. ಆದರೆ, ಬೆಳೆ ಪರಿಹಾರವೇ ಬೇರೆ ಹಾಗೂ ಬೆಳೆ ವಿಮೆಯೇ ಬೇರೆ, ಇದರ ಬಗ್ಗೆ ತಿಳಿದುಕೊಳ್ಳೋಣ.

ನೀವು, PMFBY ಎಂದರೆ ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ಬೆಳೆಗೆ ವಿಮೆ ಮಾಡಿಸಿದ್ದರೆ, ಆ ಬೆಳೆಯನ್ನೇ ನೀವು ಬೆಳೆದಿರಬೇಕು ಹಾಗೂ ಸಮೀಕ್ಷೆಯನ್ನು ಕೂಡ ಮಾಡಿರಬೇಕು.

ಉದಾಹರಣೆ: ನೀವು 100/1 ಸರ್ವೇ ನಂಬರ್ ನಲ್ಲಿ ಐದು ಎಕರೆ ಹೆಸರು ಹಾಗೂ ಐದು ಎಕರೆ ಶೇಂಗಾ ಎಂದು ಬೆಳೆ ವಿಮೆ ಮಾಡಿಸಿದ್ದು, ಬೆಳೆ ಸಮೀಕ್ಷೆ ಮಾಡಿದರೂ ಕೂಡ ನಿಮಗೆ ವಿಮಾ ಹಣ ಬರುತ್ತದೆ. ಯಾವ ಬೆಳೆಯನ್ನು ಬೆಳೆದು ಅರ್ಜಿಯಲ್ಲಿ ಹೆಸರಿಸುತ್ತಿರೋ, ಸಮೀಕ್ಷೆ ಮಾಡಿದ ಬೆಳೆಯೂ ಅದೇ ಆಗಿರಬೇಕು, ಇಲ್ಲವಾದರೆ, ಬೆಳೆ ಹೊಂದಾಣಿಕೆಯಿಲ್ಲ ಎಂದರೆ Crop mismatch ಎಂದು ಬರುತ್ತದೆ.

ಇನ್ನು, ಬೆಳೆ ಸಮೀಕ್ಷೆಯನ್ನು ಯಾವಾಗ ಮಾಡಬಹುದು ಎಂದು ನೋಡುವುದಾದರೆ, ಬೆಳೆ ಸಮೀಕ್ಷೆಯು ವರ್ಷದುದಕ್ಕೂ ಲಭ್ಯವಿರುವುದಿಲ್ಲ, ಋತುವಿನನುಸಾರ ಬೆಳೆ ಸಮೀಕ್ಷೆ ಆರಂಭವಾಗಿ ನಂತರ ಕ್ಲೋಸ್ ಆಗುತ್ತದೆ.

ಮುಂಗಾರು, ಪೂರ್ವ ಮುಂಗಾರು, ಹಿಂಗಾರು ಬೇಸಿಗೆ, ಹೀಗೆ ಋತುವಿನನುಸಾರ ಬೆಳೆ ಸಮೀಕ್ಷೆ ಪ್ರಾರಂಭವಾದಾಗಲೇ ಬೆಳೆ ಸಮೀಕ್ಷೆಯನ್ನು ಮಾಡಿಕೊಳ್ಳಬೇಕು. ಜೊತೆಗೆ, ಸರ್ಕಾರವು ನಿಗದಿಪಡಿಸಿದ ದಿನಾಂಕದೊಳಗಾಗಿಯೇ ನೀವು ಬೆಳೆ ಸಮೀಕ್ಷೆಯನ್ನು ಮಾಡಿಕೊಳ್ಳಬೇಕು.

ಅಡಿಕೆ ಬೆಳೆ ಅನುದಾನ : ಅಡಿಕೆಯನ್ನು ಭಾದಿಸುವ ಎಲೆ ಚುಕ್ಕೆರೋಗ ತಡೆಗೆ 10 ಕೋಟಿ ರೂ. ಅನುದಾನ ಘೋಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ

Leave a Reply

Your email address will not be published. Required fields are marked *